ಪಿಚೈ ಸುಂದರರಾಜನ್ ಅಥವಾ ಹೆಚ್ಚು ಪರಿಚಿತವಾಗಿ ಸುಂದರ್ ಪಿಚೈ ಮಾಹಿತಿ ತಂತ್ರಜ್ಞಾನದ ಕಾರ್ಯನಿರ್ವಹಣಾಧಿಕಾರಿ. ಇವರು ಈಗ ಪ್ರಸಿದ್ಧ ಗೂಗಲ್ ಸಂಸ್ಥೆಯ ಮುಂದಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕಗೊಂಡಿದ್ದಾರೆ. == ಬಾಲ್ಯ ಮತ್ತು ವಿದ್ಯಾಭ್ಯಾಸ == ಪಿಚೈ ಮಧುರೆಯಲ್ಲಿ ೧೯೭೨ರಲ್ಲಿ ಜನಿಸಿದರು. ತಂದೆ ರಘುನಾಥ ಪಿಚೈ ಬ್ರಿಟಿಷ್ ಕಂಪನಿ ಜಿ.ಇ.ಸಿ ಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದರು. ಪಿಚೈ ಮದ್ರಾಸಿನಲ್ಲಿ ತನ್ನ ಬಾಲ್ಯ ಹಾಗೂ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪೂರೈಸಿ ಉನ್ನತ ವ್ಯಾಸಂಗಕ್ಕಾಗಿ ಖರಗ್‌ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯನ್ನು ಸೇರಿದರು.ಅಲ್ಲಿಂದ ಮುಂದೆ ಹೆಚ್ಚಿನ ವ್ಯಾಸಂಗಕ್ಕಾಗಿ ಪ್ರಸಿದ್ಧ ಸ್ಟಾನ್‍ಫರ್ಡ್ ವಿಶ್ವವಿದ್ಯಾಲಯವನ್ನು ಆಯ್ದುಕೊಂಡು ಅಲ್ಲಿ ಎಮ್.ಎಸ್. ಪದವಿಯನ್ನು ಪಡೆದರು. ಎಮ್.ಬಿ.ಎ ಪದವಿಯನ್ನು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪ್ರಸಿದ್ಧ ವಾರ್ಟನ್ ಸ್ಕೂಲ್‍ನಲ್ಲಿ ಪಡೆದರು.ಅಲ್ಲಿ ಅವರು ಸಿಬೆಲ್ ಸ್ಕಾಲರ್ ಹಾಗೂ ಪಾಲ್ಮರ್ ಸ್ಕಾಲರ್ ಆಗಿ ಆಯ್ಕೆಯಾಗಿದ್ದರು. ಮೆಕಿನ್ಸೆ ಮತ್ತು ಕಂಪನಿ ಸಂಸ್ಥೆಯಲ್ಲಿ ತಂತ್ರಜ್ಞಾನ ಮತ್ತು ಉತ್ಪನ್ನ ನಿರ್ವಹಣಾಧಿಕಾರಿಯಾಗಿ ತನ್ನ ವೃತ್ತಿ ಬದುಕನ್ನು ಪ್ರಾರಂಭಿಸಿದರು. == ಸುಂದರ್ ಪಿಚೈ ಮುಖ್ಯ ನಿರ್ವಹಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು == ಈ ಬೆಳವಣಿಗೆ ಲಾರಿ ಪೇಜ್ ಮತ್ತು ಸರ್ಜಿ ಬ್ರಿನ್ ತಮ್ಮ ಪದವಿಯಿಂದ ಹೊರಗೆ ಬಂದಮೇಲೆ ಪಿಚೈ ಅವರಿಗೆ ಅಧಿಕಾರವನ್ನು ವಹಿಸಿಕೊಡಲಾಯಿತು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಟ್ವಿಟರ್ನಲ್ಲಿ